"काली" इत्यस्य संस्करणे भेदः

No edit summary
पङ्क्तिः ४७:
 
==तन्त्रेषु==
[[File:Kali yantra color.jpg|thumb|ಕಾಳಿ ಯಂತ್ರकालिकायन्त्रम्]]
देव्यः तन्त्रयोगस्य अध्ययने आचरणे च महत्तरं भूमिकां निर्वहन्ति । पुरुषदेवताः इव वास्तवस्वरूपं ज्ञातुं विवेचनशक्तियुक्तं केन्द्रम् इति विश्वस्तम् । तथापि [[पार्वती]] स्वीकर्त्री तन्त्ररूपेण शिवस्य पाण्डित्यं प्राप्यमाना छात्रा इति उक्तम् । तान्त्रिकप्रतिमाशास्त्रे ग्रन्थेषु आचरणेषु च काली एव प्रमुख्यं प्राप्तवती ।<ref name="D. Kinsley p. 122"> डि.किन्ल्से १२२पुटानि</ref> [[ब्रह्मा]], [[विष्णुः]], [[शिवः]] इति देवाः समुद्रस्य फेनबुद्बुदानि इव ताया एव उद्भूताः स्वेषां मूलम् अपरिवर्त्य संरक्ष्य निर्गच्छन्ति इति निर्वाणतन्त्रम् । निरुत्तरतन्त्रम्, पिच्चिलतन्त्रम् च काल्याः सर्वे मन्त्राः सर्वश्रेष्ठाः इति घोषयतः । योगिनीतन्त्रम्, कामाक्यतन्त्रम्, निरुत्तरतन्त्रम्, इत्यादीनि कालिविद्यातन्त्राणि इति प्रसिद्धानि ।<ref>डि.किन्ले पुटानि १२२-१२३</ref>. महानिर्वाणतन्त्रे काली आदिशक्त्याः विशेषणम् एव ।
 
ಈ ದೇವಿಯರು ತಂತ್ರ ಯೋಗದ ಅಧ್ಯಯನ ಮತ್ತು ಆಚರಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾರೆ. ಮತ್ತು ಪುರುಷ ದೇವತೆಗಳಂತೆ ವಾಸ್ತವ ಸ್ವರೂಪವನ್ನು ಅರಿಯಬಲ್ಲ ವಿವೇಚನಾಶಕ್ತಿಯನ್ನು ಹೊಂದಿರುವ ಕೇಂದ್ರವೆಂದು ನಂಬಲಾಗಿದೆ. ಹೀಗಿದ್ದರೂ [[ಪಾರ್ವತಿ]]ಯು ಸ್ವೀಕರಿಸುವವಳು ಮತ್ತು ''ತಂತ್ರಗಳ'' ರೂಪದಲ್ಲಿ [[ಶಿವ]]ನ ವಿದ್ವತ್ತನ್ನು ಕಲಿಯುವ ವಿದ್ಯಾರ್ಥಿಯೆಂದು ಹೇಳಲಾಗುತ್ತದೆ. ತಾಂತ್ರಿಕ ಪ್ರತಿಮಾಶಾಸ್ತ್ರದಲ್ಲಿ, ಗ್ರಂಥಗಳಲ್ಲಿ ಮತ್ತು ಆಚರಣೆಗಳಲ್ಲಿ ಕಾಳಿಯೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.<ref name="D. Kinsley p. 122">ಡಿ.ಕಿನ್್ಸ್ಲೇ ಪುಟ. 122.</ref> ಅನೇಕ ಮೂಲಗಳಲ್ಲಿ ಪರಮ ಸತ್ಯವೆಂದು ಅಥವಾ ಎಲ್ಲ ದೇವರಿಗಿಂತ ಮಹಾನ್ ಎಂದು ಹೊಗಳಲಾಗುತ್ತಿದೆ. ದೇವತೆಗಳಾದ [[ಬ್ರಹ್ಮ]], [[ವಿಷ್ಣು]] ಮತ್ತು [[ಶಿವ]] ಎಲ್ಲರೂ ಸಮುದ್ರದ ನೊರೆ ಗುಳ್ಳೆಗಳಂತೆ ಅವಳಿಂದಲೇ ಮೂಡುತ್ತಾರೆ ಮತ್ತು ಎಡೆಬಿಡದೆ ಉಗಮಿಸುತ್ತಾರೆ ಮತ್ತು ಮರೆಯಾಗುತ್ತಾರೆ. ತಮ್ಮ ಮೂಲ ಆಕರವನ್ನು ಬದಲಾಗದಂತೆ ಉಳಿಸಿ ಹೋಗುತ್ತಾರೆ ಎಂದು ''ನಿರ್ವಾಣ ತಂತ್ರ'' ಹೇಳುತ್ತದೆ. ''ನಿರುತ್ತರ-ತಂತ್ರ'' ಮತ್ತು ''ಪಿಚ್ಚಿಲ-ತಂತ್ರ'' ಕಾಳಿಯ ಎಲ್ಲ ಮಂತ್ರಗಳು ಸರ್ವಶ್ರೇಷ್ಠ ಎಂದು ಘೋಷಿಸುತ್ತವೆ ಮತ್ತು ''ಯೋಗಿನಿ-ತಂತ್ರ'' , ''ಕಾಮಾಕ್ಯ-ತಂತ್ರ'' ಮತ್ತು ''ನಿರುತ್ತರ-ತಂತ್ರ'' ಗಳೆಲ್ಲವೂ ಕಾಳಿ ''ವಿದ್ಯೆ'' ಗಳೆಂದು ಹೆಸರಾಗಿವೆ. (''ಮಹಾದೇವಿ'' ಅಥವಾ "ಅದರಷ್ಟಕ್ಕೇ ದೇವತಾಶಾಸ್ತ್ರ."ವೆಂದು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.) ''ಮಹಾದೇವಿ'' ಯ ''ಸ್ವರೂಪ'' ದ ಸಾರವೆಂದೇ ಅವುಗಳೆಲ್ಲ ಘೋಷಿಸಿವೆ<ref>ಡಿ.ಕಿನ್್ಸ್ಲೇ ಪುಟ. 122–123.</ref>.
 
''ಮಹಾನಿರ್ವಾಣ ತಂತ್ರ'' ದಲ್ಲಿ ಕಾಳಿಯು ಆದಿ ''ಶಕ್ತಿ'' ಗೆ ವಿಶೇಷಣವೇ ಆಗಿದೆ. ಮತ್ತು ಒಂದು ಭಾಗದಲ್ಲಿ [[ಶಿವ]]ನು ಅವಳನ್ನು ಹೊಗಳುತ್ತಾನೆ:
 
:''ವಸ್ತುಗಳ ವಿಘಟನೆಯಲ್ಲಿ ಇದು ಕಾಲ (ಸಮಯ). ಆತನೇ ಎಲ್ಲವನ್ನೂ ಭಕ್ಷಿಸುವವನು, ಈ ಕಾರಣದಿಂದ ಆತನನ್ನು ಮಹಾಕಾಲನೆಂದು ಕರೆಯುವರು. (ಶಿವನ ಒಂದು ವಿಶೇಷಣ), ಮತ್ತು ಮಹಾಕಾಲನೇ ಸ್ವತಃ ಮಹಾಭಕ್ಷಕನಾಗಿರುವುದರಿಂದ ನೀನೇ ಸರ್ವಶ್ರೇಷ್ಠ ಆದಿಶಕ್ತಿ ಕಾಲಿಕಾನ ನಿರ್ಮಾತೃವೂ ಹೌದು. '' ''ಯಾಕೆಂದರೆ ನೀನು ಸರ್ವಭಕ್ಷಕ ಕಾಲ. ನೀನು ಕಾಳಿಯ ನಿರ್ಮಾತೃ, ಎಲ್ಲ ವಸ್ತುಗಳ ಮೂಲ ರೂಪ, ಮತ್ತು ಯಾಕೆಂದರೆ ನೀನು ಎಲ್ಲ ಮೂಲಗಳ ನಿರ್ಮಾತೃ ಮತ್ತು ಎಲ್ಲ ವಸ್ತುಗಳ ಸರ್ವಭಕ್ಷಕನಾಗಿರುವುದರಿಂದ ನಿನ್ನ ನಿರ್ಮಾಣವನ್ನು ಆದ್ಯ (ಆದಿ ಕಾಳಿ) ಎಂದು ಕರೆಯುವುದು. '' ''ವಿಘಟನೆಯ ಬಳಿಕ ಕಪ್ಪು ಮತ್ತು ಆಕಾರವಿಲ್ಲದ ನಿನ್ನದೇ ಸ್ವಂತ ರೂಪವನ್ನು ಮರಳಿ ಪಡೆದು, ನೀನೊಬ್ಬಳೇ ಅವರ್ಣನೀಯ ಮತ್ತು ಅನೂಹ್ಯವಾದ ಸ್ಥಿತಿಯಲ್ಲಿರುವಿ. '' ''ಒಂದು ರೂಪವನ್ನು ಹೊಂದಿದ್ದರೂ ನೀನು ಆಕಾರ ರಹಿತಳಾಗಿರುವಿ, ನಿನ್ನಷ್ಟಕ್ಕೆ ನಿನಗೆ ಆದಿ ಇಲ್ಲದಿದ್ದರೂ ಮಾಯೆಯ ಮೂಲಕ ನೀನು ಅನೇಕ ಆಕಾರ ತಳೆಯುವಿ, ಎಲ್ಲ ಆರಂಭಗಳಿಗೂ ನೀನೇ ನಿರ್ಮಾತೃವಾಗಿದ್ದರೂ, ಸೃಷ್ಟಿಕರ್ತೆ, ರಕ್ಷಕಿ ಮತ್ತು ಅದು ನಿನ್ನದೇ ನಿರ್ಮಾಣವಾಗಿದ್ದರೂ ನಾಶಮಾಡುವವಳೂ ಹೌದು'' <ref name="D. Kinsley p. 122" />
 
ಕಾಳಿಯ ಆಕಾರವು ಸಾವನ್ನು, ವಿನಾಶವನ್ನು ಮತ್ತು ವಾಸ್ತವತೆಯನ್ನು ನುಂಗಿಹಾಕುವ ದರ್ಶನವನ್ನು ಸೂಚಿಸುತ್ತದೆ. ಇದು ಹೀಗಿರುವಾಗ ಆಕೆಯು ಒಂದು "ನಿಷಿದ್ಧ ವಸ್ತು"ವೂ ಹೌದು, ಅಥವಾ ತನ್ನಷ್ಟಕ್ಕೆ ಸಾವೂ ಕೂಡ. ''ಪಂಚತತ್ವ'' ಪದ್ಧತಿಯಲ್ಲಿ ''ಸಾಧಕ'' ನು ದಿಟ್ಟತನದಿಂದ ಕಾಳಿಯೊಂದಿಗೆ ಸಂಘರ್ಷವನ್ನು ಬಯಸುತ್ತಾನೆ ಮತ್ತು ಆಮೂಲಕ ಆಕೆಯನ್ನು ಅನುರೂಪಗೊಳಿಸುತ್ತಾನೆ ಮತ್ತು ಅವಳನ್ನು ಮೋಕ್ಷದ ಸಾಧನವನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ.<ref name="D. Kinsley p. 124">ಡಿ.ಕಿನ್್ಸ್ಲೇ ಪುಟ. 124.</ref> ''ಕರ್ಪುರದಿ-ಸ್ತೋತ್ರ'' <ref>[http://chestofbooks.com/new-age/spirituality/tantra/Karpuradistotram/ ಕೃಪಾನಿಧಿ ಸ್ತೋತ್ರ], ತಾಂತ್ರಿಕ ಗ್ರಂಥ ಸಂಪುಟ IX, ಅರ್ಥರ್ ಅವಲಾನ್ (ಸರ್ ಜಾನ್ ವುಡ್ರೋಫೆ), ಕಲ್ಕತ್ತಾ ಆಗಮಾನುಸಂಧಾನ ಸಮಿತಿ, 1922.</ref> ಕೃತಿಯಲ್ಲಿ ಇದು ಸ್ಪಷ್ಟವಾಗಿದೆ. ಶ್ಮಶಾನ ಭೂಮಿಯಲ್ಲಿ ಇದು ಕಾಳಿಗೆ ''ಪಂಚತತ್ವ'' ಆಚರಣೆಯನ್ನು ನಡೆಸುವುದನ್ನು ವರ್ಣಿಸುವ ಚಿಕ್ಕ ಪದ್ಯವಾಗಿದೆ. (''ಸಮಾಹನ-ಸಾಧನ'' )
 
:''ಓ ಮಹಾಕಾಳಿ, ಯಾರು ಶ್ಮಶಾನ ಭೂಮಿಯಲ್ಲಿ ಬೆತ್ತಲೆಯಾಗಿ, ಕೆದರಿದ ಕೂದಲುಗಳೊಂದಿಗೆ, ನಿನ್ನನ್ನು ಧ್ಯಾನ ಮಾಡುತ್ತಾನೋ, ನಿನ್ನ ಮಂತ್ರವನ್ನು ಉಚ್ಚರಿಸುತ್ತಾನೋ ಮತ್ತು ಪ್ರತಿ ಮಂತ್ರೋಚ್ಚಾರಣೆ ಸಂದರ್ಭದಲ್ಲಿ ಬೀಜಗಳನ್ನು ಹೊಂದಿರುವ ಸಾವಿರ ಅಖಂಡ ಹೂಗಳನ್ನು ನಿನಗೆ ಅರ್ಪಿಸುತ್ತಾನೋ ಆತನು ಯಾವುದೇ ಶ್ರಮವಿಲ್ಲದೆ ಈ ಭೂಮಿಯ ದೊರೆಯಾಗುತ್ತಾನೆ. '' '' ಓ ಕಾಳಿ, ಯಾವನು ಶ್ಮಶಾನ ಭೂಮಿಯಲ್ಲಿ ಮಂಗಳವಾರ ಮಧ್ಯರಾತ್ರಿ ನಿನ್ನ ಮಂತ್ರವನ್ನು ಪಠಿಸುತ್ತಾನೋ, ಒಮ್ಮೆ ತನ್ನ ಶಕ್ತಿಯ (ತನ್ನ ಮಹಿಳಾ ಸಂಗಾತಿಯ) ಒಂದು ಕೂದಲನ್ನೇ ಭಕ್ತಿಯಿಂದ ಅರ್ಪಿಸುತ್ತಾನೋ ಆತ ಮಹಾನ್ ಕವಿಯಾಗುತ್ತಾನೆ, ಭೂಮಿಯ ದೊರೆಯಾಗುತ್ತಾನೆ ಮತ್ತು ಸದಾಕಾಲ ಆನೆಯನ್ನು ಏರಿಕೊಂಡೇ ಸಂಚರಿಸುತ್ತಾನೆ.'' <ref name="D. Kinsley p. 124" />
 
ಕಾಳಿಯು ಭಯಾನಕ, ಕೋಪಿಷ್ಠ, ದುರ್ಗೆ ಅಥವಾ [[ಶಿವ]]ನನ್ನು ಪೂಜಿಸುವ ದೈತ್ಯರನ್ನು ಸಂಹಾರ ಮಾಡುವವಳು ಎಂದು ''ಕರ್ಪುರದಿ-ಸ್ತೋತ್ರ'' ಸ್ಪಷ್ಟವಾಗಿ ಸೂಚಿಸುತ್ತದೆ. ಇಲ್ಲಿ ಅವಳು ಪಂಚಭೂತಗಳನ್ನು ಒಳಗೊಂಡ ವಿಶ್ವದ ಸರ್ವಶ್ರೇಷ್ಠ ಅಧಿನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾಳೆ. ತನ್ನ ಪತಿಯಾದ ಭಗವಾನ್ [[ಶಿವ]]ನೊಂದಿಗೆ ಸೇರಿಕೊಂಡು, ಅವಳು ಜಗತ್ತನ್ನು ಸೃಷ್ಠಿಸುತ್ತಾಳೆ ಮತ್ತು ನಾಶವನ್ನೂ ಮಾಡುತ್ತಾಳೆ. ಜಗತ್ತನ್ನೇ ಆಳುವವಳು ಮತ್ತು ಧ್ಯಾನದ ವಸ್ತುವಾಗಿ ತನ್ನ ಪಾತ್ರಕ್ಕೆ ತಕ್ಕಂತೆ ಅವಳ ತೋರಿಕೆಯೂ ವಿಭಿನ್ನ ತಿರುವನ್ನು ಪಡೆಯುತ್ತದೆ.<ref>ಡಿ.ಕಿನ್್ಸ್ಲೇ ಪುಟ. 124–125.</ref> ತನ್ನ ಭಯಾನಕ ಸ್ವರೂಪಕ್ಕೆ ವಿರುದ್ಧವಾಗಿ ಹೆಚ್ಚು ಕರುಣಾಳುವಾದ ರೂಪವನ್ನೂ ಆಕೆ ಧರಿಸಬಲ್ಲಳು. ಆಕೆಯನ್ನು ಯುವತಿ ಮತ್ತು ಸುಂದರಿ, ಗಂಭೀರ ಮುಗುಳ್ನಗೆಯನ್ನು ಹೊಂದಿದವಳು ಮತ್ತು ತನ್ನೆರಡು ಬಲ ಕೈಗಳನ್ನು ಯಾವುದೇ ಭಯವನ್ನು ನಿವಾರಿಸುವ ಭರವಸೆಯನ್ನು ನೀಡುವಂತೆ ಮತ್ತು ವರಗಳನ್ನು ಪ್ರದಾನ ಮಾಡುವಂತೆ ಎತ್ತಿದವಳು ಎಂದು ವರ್ಣಿಸಲಾಗಿದೆ. ಹೆಚ್ಚು ಸಕಾರಾತ್ಮಕವಾದ ಲಕ್ಷಣಗಳೆಂದರೆ, ದೈವೀ ಕೋಪವನ್ನು ಮುಕ್ತಿಯನ್ನು ನೀಡುವ ದೇವಿಯಾಗಿ ಪರಿವರ್ತಿಸುವುದು. ಅದು ''ಸಾಧಕ'' ನ ಭಯವನ್ನು ಪರಿಹರಿಸುವುದು. ಇಲ್ಲಿ, ಕಾಳಿಯು ಸಾವಿನ ಮೇಲೆ ವಿಜಯ ಸಾಧಿಸಿದ ಸಂಕೇತದಂತೆ ತೋರುತ್ತಿದ್ದಾಳೆ.<ref>ಡಿ.ಕಿನ್್ಸ್ಲೇ ಪುಟ. 125.</ref>
 
==ಬಂಗಾಳಿ ಸಂಪ್ರದಾಯದಲ್ಲಿ==
"https://sa.wikipedia.org/wiki/काली" इत्यस्माद् प्रतिप्राप्तम्